Wednesday, February 1, 2012

ಹಂದಿ ಹುಳು ಮತ್ತು ಅದರ ಮನೆ.... Pig-worm and its home ....

        ಇದೊಂದು ವಿಸಿಷ್ಟ ಬಗೆಯ ಹುಳು. ನಮ್ಮ ಭಾಗದಲ್ಲಿ ಈ ಹುಳುವನ್ನು "ಹಂದಿಹುಳು" ಎನ್ನುತ್ತಾರೆ. ಇದು ತುಂಬಾ ತೆಳುವಾದ ಮಣ್ಣಿನಲ್ಲಿ ಸುತ್ತಲೂ ಜಾರುವಂತಹ ರಂಧ್ರವನ್ನು ನಿರ್ಮಿಸಿಕೊಂಡು ಅದರೊಳಗೆ ಬಿದ್ದ ಕೀಟಗಳನ್ನು ತನ್ನ ಆಹಾರವನ್ನು ಹುಡುಕಿಕೊಳ್ಳುತ್ತದೆ.


     ಇರುವೆಯಂಥ ಸಣ್ಣ ಸಣ್ಣ ಕೀಟಗಳು  ಆ ರಂಧ್ರದಲ್ಲಿ ಬಿದ್ದು ಹೊರ ಬರಲಾಗದೆ ಆಹಾರವಾಗುತ್ತವೆ. ಸಾಮಾನ್ಯವಾಗಿ ಆ ರಂಧ್ರ ತುಂಬಾ ನುಣುಪಾಗಿರುತ್ತದೆ. ಉತ್ತಲೂ ಜಾರುವಂತಹ ನುಣುಪಾದ ಮಣ್ಣ ಬಳಸಿ ಅದನ್ನು ನಿರ್ಮಿಸಿರುತ್ತದೆ. ಆಳದ ಅಡಿಯಲ್ಲಿ ಮಣ್ಣಿನಲ್ಲಿ ತನ್ನನ್ನು ತಾನು ಪೂರ್ಣವಾಗಿ ಕಾಣದಂತೆ ಮಣ್ಣಿನಿಂದ ಮುಚ್ಚಿಕೊಂಡಿರುತ್ತದೆ. ಇದರ ಅರಿವಿಲ್ಲದ ಕೀಟಗಳು ಆಹಾರವನ್ನರಿಸಿ ಬಂದಾಗ ತಮಗೆ ಗೊತ್ತಿಲ್ಲದಂತೆ ಆ ರಂಧ್ರದೊಳಗೆ ಜಾರಿ ಬೀಳುತ್ತವೆ.


        ಈ ಹುಳುವಿಗೆ ಮೂತಿಯಲ್ಲಿ ಉದ್ದನೆಯ ಎರಡು ಬಲೀಷ್ಟ ಕೋಡುಗಳಿಂತಿರುವ ಕೊಕ್ಕುಗಳಿರುತ್ತವೆ. ಇದರಿಂದ ತಪ್ಪಿಸಿಕೊಳ್ಳಲೆತ್ನಿಸುವಂತಹ ಕೀಟಗಳನ್ನು ಸಲೀಸಾಗಿ ಒಳಗೆಳೆದು ಕೊಂಡು ತನ್ನ ಆಹಾರವನ್ನಾಗಿಕೊಳ್ಳುತ್ತದೆ. ಇದು ಈ  "ಹಂದಿಹುಳು"ವಿನ ಮನೆ ಮತ್ತು ಆ ಅದರ ಆಹಾರಕ್ರಮ...





ಏಳು ದೀಪಗಳ ಸ್ಥಂಭ.... Pillar of the seven lights ....


ದೀಪಸ್ಥಂಭ.... Lamp-Pillar ....


ಮೌನದ ಆಳದಲ್ಲಿ .... At a depth of silence ....